ಮಾಧವಕರ
ಕ್ರಿಸ್ತಶಕ 8 ನೆಯ ಶತಮಾನದ ಬಂಗಾಲೀ ವೈದ್ಯ.  ಇಂದುಕರನ ಮಗ.  ಆಯುರ್ವೇದದ ಮೂಲ ಸಂಹಿತೆಗಳಾದ ಚರಕ, ಸುಶ್ರುತ ಹಾಗೂ ವಾಗ್ಭಟ ಉಕ್ತ ರೋಗ ಹೇತು, ಪೂರ್ವ ರೂಪ, ಲಕ್ಷಣ, ಸಂಪ್ರಾಪ್ತಿ ಮತ್ತು ಪ್ರಕಾರಗಳನ್ನು ಮಾತ್ರ ಕ್ರೊಢೀಕರಿಸಿ ರುಗ್ವಿನಿಶ್ಚಯ ಎಂಬ ಗ್ರಂಥ ರಚಿಸಿದ.  ಮುಂದೆ ಅದು ಮಾಧವನಿದಾನ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು (ನಿದಾನೇ ಮಾಧವ ಶ್ರೇಷ್ಠಃ).  ಇದರ ತೊಂಬತ್ತೆಂಟು ಪ್ರಕರಣಗಳಲ್ಲಿ ವಿವಿಧ ವ್ಯಾಧಿಗಳು ವಿವರಿಸಲ್ಪಟ್ಟಿವೆ.  ವಿಜಯರಕ್ಷಿತ ಮತ್ತು ಅವನ ಶಿಷ್ಯ ಶ್ರೀಕಂಠದತ್ತನಿಂದ ಬರೆಯಲ್ಪಟ್ಟ ಮಧುಕೋಶ ಟೀಕೆಯೊಂದಿಗೆ ಈ ಪುಸ್ತಕ ಈಗ ಆಯುರ್ವೇದೀಯರಿಗೆ ಮಾರ್ಗದರ್ಶಕವಾಗಿದೆ.	
			(ಎಸ್.ಎ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ